¡Sorpréndeme!

ಒಂದು ಶ್ಯಾಂಪೂ ಜಾಹಿರಾತಿನಲ್ಲಿ ಬೇಟಿಯಾದವರು ಈಗ ಇಟಲಿ ಯಲ್ಲಿ ವಿವಾಹವಾದರು | Oneindia Kannada

2017-12-12 1,089 Dailymotion

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ದಕ್ಷಿಣ ಇಟಲಿಯ ಮಿಲನ್ ನಗರದಲ್ಲಿ ನಿನ್ನೆ (ಸೋಮವಾರ) ಈ ಜೋಡಿಯ ವಿವಾಹ ನಡೆದಿದೆ. ಕೊಹ್ಲಿ ಮತ್ತು ಅನುಷ್ಕಾ ಮದುವೆಯಲ್ಲಿ ಇಬ್ಬರ ಕುಟುಂಬ ಸದಸ್ಯರು, ಕೆಲವೇ ಕೆಲವು ಸ್ನೇಹಿತರು ಹಾಗೂ ಆಪ್ತರು ಮಾತ್ರ ಭಾಗವಹಿಸಿದ್ದರಂತೆ. ಇಟಲಿಯ ಮಿಲಾನ್‌ನ ಸಾಂಪ್ರದಾಯಿಕ ನಗರಿ ಟಸ್ಕಾನ್ ಬಳಿಯಿರುವ ಬೊರ್ಗೊ ಫಿನೊಕಿಯೊಟೊ ಎಂಬ ರೆಸಾರ್ಟ್‌ನಲ್ಲಿ ಸೋಮವಾರ ಇಬ್ಬರ ಮದುವೆ ನಡೆದಿದೆ ಎಂದು ವರದಿಯಾಗಿದೆ. ಇನ್ನು ಪಂಜಾಬ್‌ ಸಂಪ್ರದಾಯದಂತೆ ವಿವಾಹ ಕಾರ್ಯಗಳು ನೆರವೇರಿದೆ. ಅಂದಹಾಗೆ, ತಮ್ಮ ವಿವಾಹದ ಫೋಟೋವನ್ನು ಕೊಹ್ಲಿ ಮತ್ತು ಅನುಷ್ಕಾ ತಮ್ಮ ಟ್ವಿಟ್ಟರ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಮದುವೆಯ ಬಗ್ಗೆ ಬಹಳಷ್ಟು ಕನಸು ಇಟ್ಟುಕೊಂಡಿದ್ದ ಅನುಷ್ಕಾ ಆಸೆಯಂತೆಯೇ ಅವರ ವಿವಾಹ ನಡೆದಿದೆ . ಇದೀಗ ಹಸೆಮಣೆಯೇರಿದ ವಿರುಷ್ಕಾ ಇಲ್ಲಿಯ ವರೆಗಿನ ಹಾದಿ ಹೇಗಿದೆ ನೋಡಿ
Virat and Anushka finally spoke about their wedding and they seem to be really happy . Let's look at the journey of these 2 love birds